Skip to main content


 




ಶಿರಸಿ ಜಾತ್ರೆಗೆ ಬರುವ ಸರ್ವ ಭಕ್ತಾದಿಗಳಿಗೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಹಾರ್ದಿಕ ಸುಸ್ವಾಗತ . ಜಾತ್ರೆಗೆ ಬಂದ ಭಕ್ತಾದಿಗಳಿಗೆ ಈ ಜಾಲತಾಣದಲ್ಲಿ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ .ಸುರಕ್ಷತೆಗಾಗಿ ಇಲಾಖೆಯಿಂದ ಕೈಗೊಂಡ ಹಲವು ಉಪಯುಕ್ತ ಕ್ರಮಗಳ ಕುರಿತು ಮಾಹಿತಿಯಿದ್ದು ,ಇದರ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಪಾಲನೆ ಮಾಡುವುದರ ಮೂಲಕ ಈ ಜಾತ್ರೆಯನ್ನು ಇನ್ನಷ್ಟು ಸುಂದರಗೊಳಿಸೋಣ.
ಶ್ರೀ ವಿಷ್ಣುವರ್ಧನ ಎನ್.ಐ.ಪಿ.ಎಸ್
ಪೊಲೀಸ ಅಧೀಕ್ಷಕರು
ಉತ್ತರ ಕನ್ನಡ ಜಿಲ್ಲೆ



ಶ್ರೀ ಸಿ.ಟಿ. ಜಯಕುಮಾರ ಕೆ.ಸ್.ಪಿ.ಸ್
ಹೆಚ್ಚುವರಿ ಪೊಲೀಸ್ ಅಧೀಕ್ಷಕರು
ಉತ್ತರ ಕನ್ನಡ ಜಿಲ್ಲೆ



ಶ್ರೀ ಎಂ. ಜಗಧೀಶ್ಕೆ.ಸ್.ಪಿ.ಸ್
ಹೆಚ್ಚುವರಿ ಪೊಲೀಸ್ ಅಧೀಕ್ಷಕರು
ಉತ್ತರ ಕನ್ನಡ ಜಿಲ್ಲೆ


ಶ್ರೀ ಮುತ್ತಪ್ಪ ಎಸ್. ಪಾಟೀಲ ಕೆ.ಎಸ್.ಪಿ.ಎಸ್.
ಪೊಲೀಸ ಉಪಾಧೀಕ್ಷಕರು
ಶಿರಸಿ ಉಪ-ವಿಭಾಗ, ಶಿರಸಿ

ಶಿರಸಿ ಜಾತ್ರೆಗೆ ಬರುವ ಸರ್ವ ಭಕ್ತಾದಿಗಳಿಗೆ ಶಿರಸಿ ಉಪವಿಭಾಗ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳ ಪರವಾಗಿ ಹಾರ್ದಿಕ ಸುಸ್ವಾಗತ . ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೇಶನದಲ್ಲಿ ಜಾತ್ರೆಯನ್ನು ಸುಂದರ ಮತ್ತು ಸರಳಗೊಳಿಸಲು ಅನೇಕ ಜನ ಉಪಯೋಗಿ ಕ್ರಮಗಳನ್ನು ಅಳವಡಿಸಿಕೊಂಡ ಜಾತ್ರೆಯ ಸಂಪೂರ್ಣ ಮಾಹಿತಿ ಪ್ರತಿಯೊಬ್ಬರನ್ನು ತಲುಪಿ ಜಾತ್ರೆಯು ಯಶಸ್ವಿಯಾಗಲೆಂದು ಈ ಜಾಲತಾಣವನ್ನು ಸೃಿಷ್ಟಿಸಿ ಸಾರ್ವಜನಿಕರಿಗೆ ನೀಡಲಾಗಿದೆ . ಸುಗಮ ಸಂಚಾರ ,ಅಪರಾಧ ಮುಕ್ತ ಜಾತ್ರೆಯನ್ನಾಗಿಸಲು , ಮಹಿಳೆಯರು,ಮಕ್ಕಳು,ವೃದ್ಧರ ರಕ್ಷಣೆಗಾಗಿ ವಿಶೇಷ ಘಟಕವನ್ನು ತೆರೆದಿದ್ದು ,ಸುಲಭ ದೇವರ ದರ್ಶನ ಆಗುವಂತೆ ನೋಡಿಕೊಳ್ಳಲು,ವಾಹನ ನಿಲುಗಡೆಗೆ ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರಿಗೆ ಕಲ್ಪಿಸಿದ್ದು. ಹೀಗೆ ಅನೇಕ ಉಪಯೋಗಗಳ ಮಾಹಿತಿ ಈ ಜಾಲತಾಣದಲ್ಲಿದ್ದು , ಜಾಲತಾಣವನ್ನು ಉಪಯೋಗಿಸಿಕೊಂಡು ಸೂಚನೆ ಮತ್ತು ನಿಯಮಗಳನ್ನು ಪಾಲನೆ ಮಾಡುವದರ ಮೂಲಕ ಜಾತ್ರೆಯನ್ನು ಸುಂದರ ಗೊಳಿಸೋಣ .


ಶಿರಸಿ ಜಾತ್ರೆಗೆ ಬರುವ ಸರ್ವ ಭಕ್ತಾದಿಗಳಿಗೆ ಶಿರಸಿ ವೃತ್ತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪರವಾಗಿ ಹಾರ್ದಿಕ ಸುಸ್ವಾಗತ . ಮೇಲಾಧಿಕಾರಿಗಳ ನೇರ ನಿರ್ದೇಶನದಲ್ಲಿ ಶಿರಸಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಜಾತ್ರೆಯನ್ನು ಯಶಸ್ವಿಗೊಳಿಸಲು ಅನೇಕ ಹೊಸ ಕ್ರಮಗಳ ಮೂಲಕ ಸಾರ್ವಜನಿಕ ಉಪಯೋಗಕ್ಕಾಗಿ ಈ ಜಾಲತಾಣವನ್ನು ಸೃಿಷ್ಟಿಸಿ , ಜಾತ್ರೆಯ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ . ಈ ಜಾಲತಾಣವನ್ನು ಉಪಯೋಗಿಸಿಕೊಂಡು ಅಪರಾಧ ಮುಕ್ತ ಜಾತ್ರೆಯನ್ನಾಗಿಸೋಣ