Skip to main content





ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನ ಆಡಳಿತ ಕಮಿಟಿಯವರ ಪ್ರಕಟಣೆಯಂತೆ ವಿಕಲಾಂಗ/ ಅಸಹಾಯಕ ಹಿರಿಯ ನಾಗರಿಕರಿಗೆ ಪ್ರತಿ ದಿನ ಮಧ್ಯಾನ 02-00 ಗಂಟೆಯಿಂದ ಸಂಜೆ 05-00 ಗಂಟೆಯವರೆಗೆ ಮತ್ತು ರಾತ್ರಿ 10-00 ಗಂಟೆಯಿಂದ 12-30 ಗಂಟೆಯವರೆಗೆ ಶ್ರೀ ಮಾರಿಕಾಂಬಾ ದೇವಿಯ ವಿಶೇಷ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ವಿಕಲಾಂಗ/ ಅಸಹಾಯಕ ಹಿರಿಯ ನಾಗರಿಕರಿಗೆ ವ್ಹಿಲ್ ಚ್ಯಾರ್ನ ವ್ಯವಸ್ಥೆ ಮಾಡಲಾಗಿರುತ್ತದೆ.
ವಿಕಲಾಂಗ/ ಮತ್ತು ಅಸಹಾಯಕ ಹಿರಿಯ ನಾಗರಿಕರಿಗೆ ವಿಶೇಷ ಆಟೋ ವ್ಯವಸ್ಥೆಯನ್ನು ಮಾಡಲಾಗಿದೆ.
ಶಿರಸಿ ಮಾರಿಕಾಂಬಾ ಜಾತ್ರೆ: ಮಂಗಳವಾರ ಚಂದ್ರಗ್ರಹಣ ಹಿನ್ನೆಲೆ, ದೇವಿ ದರ್ಶನ ಮತ್ತು ಪೂಜಾ ಸಮಯದಲ್ಲಿ ಬದಲಾವಣೆ : ಭಕ್ತರಿಗೆ ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಂದಿನಂತೆ ದೇವಿಯ ದರ್ಶನ ಮತ್ತು ಪೂಜಾ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಹಣ ಕಾಲಾವಧಿ ಇರುವುದರಿಂದ ಈ ಸಮಯದಲ್ಲಿ ದೇವಿಯ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಯಾವುದೇ ಪೂಜಾ ಸೇವೆಗಳು ನಡೆಯುವುದಿಲ್ಲ. ಸಂಜೆ 7.30ರ ನಂತರ ದೇವಾಲಯದ ಅರ್ಚಕರು ಆಗಮಿಸಿ, ಪೂಜಾ ನೆರವೇರಿಸಲಿದ್ದಾರೆ. ಆ ಬಳಿಕ ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ಮತ್ತೆ ದೇವಿಯ ಪೂಜೆ, ಸೇವೆ ಹಾಗೂ ದರ್ಶನ ಎಂದಿನಂತೆ ಮುಂದುವರಿಯಲಿದೆ.